top of page

ಗಣೇಶ್ ಕಾಸರಗೋಡು

ಯೋಗ ಮತ್ತು ಯೋಗ್ಯತೆ ಮೇಲೆ ಅಪಾರ ನಂಬಿಕೆಯನ್ನಿಟ್ಟುಕೊಂಡಿರುವ ಗಣೇಶ ಆಚಾರ್ಯರು ಕಾಸರಗೋಡು ಬಿಟ್ಟು 1979ರ ಸುಮಾರಿಗೆ ಬೆಂಗಳೂರಿನ ಕಾಂಕ್ರೀಟ್ ಕಾಡು ಸೇರಿಕೊಂಡಾಗ ಈಗಿನ ಬದುಕಿನ ಕನಸ್ಸನ್ನೂ ಕಂಡವರಲ್ಲ. ಒಂದು ಪುಟ್ಟ ಬಾಡಿಗೆ ಮನೆ, ಮೂರು ಹೊತ್ತಿನ ಊಟ ಮತ್ತು ಪೊಗದಸ್ತಾದ ರಾತ್ರಿಯ ನಿದ್ದೆ...ಇಷ್ಟು ಬಿಟ್ಟರೆ ಬೇರೆ ಯಾವುದರ ಬಗ್ಗೆಯೂ ತಲೆಕೆಡಿಸಿಕೊಂಡವರಲ್ಲ. ಆದರೆ ಯೋಗವಿತ್ತು, ಜತೆಗೆ ಯೋಗ್ಯತೆಯೂ ಇತ್ತು. ಈಗ ಗಣೇಶ್ ಕಾಸರಗೋಡು ಏನೇನಾಗಿದ್ದಾರೋ ಅವಕ್ಕೆಲ್ಲಕ್ಕೂ ಕಾರಣ ಇವೆರಡೇ ಅಂದರೆ ನೀವು ನಂಬಲೇ ಬೇಕು...


● ಹುಟ್ಟಿದ್ದು ಕಾಸರಗೋಡಿನಲ್ಲಿ. ಓದಿದ್ದೂ ಅಲ್ಲೇ. ಎಂ.ಎ. ಕನ್ನಡ ಪದವಿಯಲ್ಲಿ ರಾಂಕ್ ವಿಜೇತ. ಕೆಲಕಾಲ ಹೈಸ್ಕೂಲ್ ಟೀಚರಾಗಿದ್ದದ್ದೂ ಉಂಟು. ನಂತರ ಕಾಲಿಟ್ಟದ್ದು ಪತ್ರಿಕೋದ್ಯಮಕ್ಕೆ. ಮೊದಲು 'ಚಿತ್ರದೀಪ', ನಂತರ 'ಚಿತ್ರತಾರಾ', ಆನಂತರ 'ಅರಗಿಣಿ'. ಕಾಲಾನುಕ್ರಮದಲ್ಲಿ ಸಂಯುಕ್ತ ಕರ್ನಾಟಕ, ಕರ್ಮವೀರ, ವಿಜಯ ಕರ್ನಾಟಕ...ಮೊದಲಾದ ಪತ್ರಿಕೆಗಳಲ್ಲಿ ಕೆಲಸ ಮಾಡಿ ಈಗ ನಾಲ್ಕಾರು ಪತ್ರಿಕೆಗಳ ಅಂಕಣಕಾರರಾಗಿ ಕೆಲಸ ಮಾಡುತ್ತಿರುವ ಗಣೇಶ್ ಕಾಸರಗೋಡು ಸದಾ ಉತ್ಸಾಹದ ಚಿಲುಮೆಯಂತಿರುವವರು...


●ಇವರ ಪತ್ರಿಕೋದ್ಯಮದ ಸೇವೆ ಗುರುತಿಸಿ - ಕಾರ್ಯನಿರತ ಪತ್ರಕರ್ತರ ಸಂಘದ ಪ್ರಶಸ್ತಿ, ಮಂತ್ರಾಲಯದ ಪ್ರತಿಷ್ಠಿತ ವಿಜಯ ವಿಠಲ ಪ್ರಶಸ್ತಿ, ಪತ್ರಕರ್ತರ ವೇದಿಕೆ ಪ್ರಶಸ್ತಿ, ವಿಶ್ವೇಶ್ವರಯ್ಯ ಪ್ರಶಸ್ತಿ, ಹಲೋ ಗಾಂಧಿನಗರ ಪ್ರಶಸ್ತಿ, ವೈಎನ್ಕೆ ಸಾಹಿತ್ಯ ಪ್ರಶಸ್ತಿ, 2015ರ ಮೀಡಿಯಾ ಅಚೀವ್'ಮೆಂಟ್ ಅವಾರ್ಡ್, 2017ರ ಇಂಡಿವುಡ್ ಮೀಡಿಯಾ ಎಕ್ಸಲೆನ್ಸ್ ಅವಾರ್ಡ್...ದೊರಕಿವೆ. 2011-12ನೇ ಸಾಲಿನ ಪ್ರತಿಷ್ಠಿತ ಕರ್ನಾಟಕ ರಾಜ್ಯ ಸರ್ಕಾರದ ಚಲನಚಿತ್ರ ಸಾಹಿತ್ಯ ಪ್ರಶಸ್ತಿ ಇವರ 'ಚದುರಿದ ಚಿತ್ರಗಳು' ಪುಸ್ತಕಕ್ಕೆ ಲಭಿಸಿದೆ. 

61953824_309012626654027_715731039457745

● ಚದುರಿದ ಚಿತ್ರಗಳು, ಮೌನ ಮಾತಾದಾಗ, ಹೇಗಿದ್ದ ಹೇಗಾದ ಗೊತ್ತಾ?, ನೆನಪಿನಂಗಳದಲ್ಲಿ ಶಂಕರನಾಗ್, ಬೆಳ್ಳಿತೆರೆಯ ಅಮೃತಕಳಶ : ರವಿಚಂದ್ರನ್, ಗುರಿ ಹೆಗ್ಗುರಿ, ಕನ್ನಡದ ಕಣ್ಮಣಿ : ಕಾಳಿಂಗರಾಯರು, ಪ್ರೀಮಿಯರ್ ಬಸವರಾಜಯ್ಯ, ಬಣ್ಣ ಮಾಸಿದ ಬದುಕು, ನೂರು ಚಿತ್ರಗಳು ನೂರಾರು ನೆನಪುಗಳು, ಚಿಗುರಿದ ಕನಸುಗಳು, ಸ್ಪೂರ್ತಿಯಿಂದ ರಮೇಶ್, ಆಫ್ ದಿ ರೆಕಾರ್ಡ್, ಅಭಿಮಾನದ ಬಾಲಣ್ಣ, ಹುಲಿಕಲ್ ನಟರಾಜ್, ಅಂತರಂಗ ಬಹಿರಂಗ ದರ್ಶನ ಮತ್ತೀಗ 'ಶುಭಂ' - ಇವೆಲ್ಲಾ ಗಣೇಶ್ ಕಾಸರಗೋಡು ಬರೆದಿರುವ ಪುಸ್ತಕಗಳು...


● ರಾಜ್ಯದ ಬೇರೆ ಬೇರೆ ಪತ್ರಿಕೆಗಳಿಗಾಗಿ ಇವರು ಬರೆದಿರುವ ಅಂಕಣಗಳ ಲಿಸ್ಟ್ ಇಲ್ಲಿದೆ : ವ್ಯಾಪ್ತಿ ಪ್ರದೇಶದಿಂದ ಹೊರಗೆ, ಮಾಯಾಬಜಾರ್, ಮಾನಸ ಸರೋವರ, ಮಾತುಕತೆ, ಸೈಡ್'ವಿಂಗ್, ಚದುರಿದ ಚಿತ್ರಗಳು, ಮೌನ ಮಾತಾದಾಗ, ಹೇಗಿದ್ದ ಹೇಗಾದ ಗೊತ್ತಾ?, ಕುಶಲವೇ ಕ್ಷೇಮವೇ ಹಾಗೂ ದೂರದರ್ಶನಕ್ಕಾಗಿ 'ಚದುರಿದ ಚಿತ್ರಗಳು', ಈಟಿವಿಗಾಗಿ 'ಬಣ್ಣ ಮಾಸಿದ ಬದುಕು', ಉದಯ ಟಿವಿಗಾಗಿ 'ಹೇಗಿದ್ದ ಹೇಗಾದ ಗೊತ್ತಾ?' - ಮೊದಲಾದ ಕಾರ್ಯಕ್ರಮಗಳನ್ನು ಸಂಯೋಜಿಸಿಕೊಟ್ಟಿದ್ದಾರೆ ಗಣೇಶ್ ಕಾಸರಗೋಡು. 


    - 'ಶುಭಂ' ಇದು ಇವರ 25ನೇ ಪುಸ್ತಕ. ಒಬ್ಬ ಹಿರಿಯ ಸಿನಿಮಾ ಪತ್ರಕರ್ತನಾಗಿ ವೃತ್ತಿ ಬದುಕಿನಲ್ಲಿ ಕಂಡುಂಡ ಕೆಲವು ಸಿಹಿ-ಕಹಿ ಘಟನೆಗಳನ್ನು ಈ ಪುಸ್ತಕದಲ್ಲಿ ಹಂಚಿಕೊಂಡಿದ್ದಾರೆ. ಖಂಡಿತಾ ಇದು ಬಯಾಗ್ರಫಿಯಲ್ಲ. ಕನ್ನಡ ಚಿತ್ರರಂಗದ ಇತಿಹಾಸವೂ ಅಲ್ಲ. ಇವೆರಡರ ಹದವಾದ ಮಿಶ್ರಣವೇ 'ಶುಭಂ'. ಬರೋಬ್ಬರಿ 40 ವರ್ಷಗಳ ಸಿನಿಮಾ ಮಂದಿ ಜತೆಗಿನ ಒಡನಾಟದ ಹೃದ್ಯ ಇನ್ಸಿಡೆಂಟ್'ಗಳ ಅನಾವರಣ...

bottom of page